ಯಾವ ಕಾರಣಕ್ಕೆ ಇವರಿಗೆ ಮತ ನೀಡಬೇಕು ??

ಇದು ಪ್ರತಿಯೊಬ್ಬನ ಕರ್ನಾಟಕದ ಮತದಾರನ ಮನದಲ್ಲಿ ಕಾಡುತ್ತಿರುವ ಪ್ರಶ್ನೆ !!

ಈ ಬಾರಿಯ ಚುನಾವಣೆಯ ಕಾವು ಯಾವ ಮಟ್ಟಿಗೆ ಏರಿದೆಯೆಂದರೆ ಒಬ್ಬ ಲೇಖಕರ ಸಾವನ್ನು ಸಹ ರಾಜಕೀಯವಾಗಿ ತಿರುಗಿಸಿ ಪ್ರತಿಪಕ್ಷದ ಮೇಲೆ ಹೊರಸುತ್ತ ಕೊಲೆಗಾರರನ್ನೂ ಪತ್ತೆಹಚ್ಚುವಲ್ಲಿ ರಾಜ್ಯದ ಸಿದ್ರಾಮಯ್ಯ ನೇತೃತ್ವದ ಸರ್ಕಾರ ಎಡವಿದೆ.
ಈ ಹಿಂದೆ ಪೋಲಿಸರ ಸಾವಿನ ತನಿಖೆಯನ್ನು ವ್ಯಯುಕ್ತಿಕ ಸಮಸ್ಯೆಯ ಆತ್ಮಹತ್ಯೆ ಎಂದು ತಿರುಚಿದ್ದು ನೆನಪಿರಬಹುದು.
ತನ್ನಲ್ಲಿ ಭ್ರಷ್ಟಾಚಾರ ಸುಳಿದಿಲ್ಲ ಎನ್ನುವ ಸಿದ್ರಾಮಯ್ಯ ರಾಜಾಕಾಲುವೆಯ ಹಣದ ಲೆಕ್ಕಾಚಾರವಿಲ್ಲದೆ ಕೆರೆಗಳ ಡಿ-ನೋಟಿಫಿಕೇಷನ್.ರಸ್ತೆ ದುರಸ್ಥೆಯನ್ನು ಮಾಡಿಸದಂತ ಒಬ್ಬ ದುರಂತ ನಾಯಕ. ಇನ್ನು ರೈತರ ಸಾವು ಪೋಲಿಸರ ವರ್ಗಾವಣೆ ವಾಚ್ ಹಗರಣಗಳಿಂದ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ರಾಜ್ಯದ ಪ್ರತ್ಯೇಕ ಧ್ವಜದ ಬೇಡಿಕೆ ಮತ್ತು ಜಾತಿವಾರು ವಿಂಗಣೆಯ ಒಳಜಗಳ ತಂದಿಕ್ಕಿದಂತಹ ಮಹಾನುಭಾವ.

ಇನ್ನು ನಂತರ ಬರುವ ಭ್ರಷ್ಟರನ್ನು ಅತಿ ಹೆಚ್ಚುಸಂಪಾದಿಸಿದಂತಹ ಕರ್ನಾಟಕದ ಬಿಜೇಪಿ ಪಕ್ಷ.

ವಿಪಕ್ಷ ನಾಯಕರು ಕಾಂಗ್ರೇಸ ಮಾಡಿದಂತಹ ಭ್ರಷ್ಟಾಚಾರವನ್ನು ಪ್ರಶ್ನಿಸುವಷ್ಟು ಯೋಗ್ಯರಲ್ಲದಷ್ಟು ಭ್ರಷ್ಟರೆ ತುಂಬಿದ್ದಾರೆ !! (ಕೆಲವರು ಉತ್ತಮ ಜನರೂ ಇದ್ದಾರೆ ಆದರೆ ತೆಪ್ಪಗಿದ್ದಾರೆ )

ಶಿಕಾರಿಪುರದಿಂದ ಆಯ್ಕೆಯಾದಂತಹ ಯಡೆಯೂರಪ್ಪನವರ ಅಧಿಕಾರವಧಿಯಲ್ಲಿ ಗಣಿ ಹಗರಣ ಭೂಕಬಳಿಕೆ .
ಸಚಿವರ ಪುಂಡಾಟಿಕೆ ನಿಗ್ರಹಿಸದೆ ಮತ್ತು ಮುಖ್ಯಮಂತ್ರಿಯ ಕುರ್ಚಿಯನ್ನ ಹಸ್ತಾಂತರಿಸಿ ಕೊನೆಗೂ ಸೋತುಹೋದರು..!!
BBMP ಗೆದ್ದಬಳಿಕ ವಿಪಕ್ಷದವರ ಮುಂದೆ ಉರಿದಾಡಿದ ಕೆಲಸಕ್ಕೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಮತ್ತೆ ಸೋಲಿನ ಹಂತ ತಲುಪಿದ ಒಂದು ಮಹಾನ್ ಪಕ್ಷ.

ಮೂರನೆಯ ಒಂದು ದೊಡ್ಡ ಪಕ್ಷ ಅಪ್ಪಾಜಿ ಟೈಟಲ್ ಅಡಿಯಲ್ಲಿ ಹವಾ ಮಾಡುತ್ತಿದ್ದ ಸೂಟಕೇಸ್ ರಾಜಕಾರಣದ JDS ಪಕ್ಷದ ಮಾಜಿ ಪ್ರಧಾನಿ ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದ ಚಾಣಕ್ಯ, ಜಾತಿರಾಜಕಾರಣವನ್ನು ಪರಾಕಾಷ್ಠೆಗೆ ಕೊಂಡೊಯ್ದ ಸೆಕ್ಯುಲರ್ ಭೀಷ್ಮ, ಜತೆಗಾರರ ಬೆನ್ನಿಗೆ ಚೂರಿ ಹಾಕುವ ಬ್ರೂಟಸ್, ವಚನ ಭ್ರಷ್ಟತೆಯನ್ನು ಪೋಷಿಸಿದ ಪಾಪಕೋಟಿ, ಕುಟುಂಬದ ಏಳಿಗೆಯನ್ನು ಮಾತ್ರ ಬಯಸುವ ಹಿರಿಯ ತಲೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಲೀಲೆಯಂತು ಅಪಾರ.

ದೇವೇಗೌಡರು ಬಂದರೆ ಮಾತ್ರ ಒಕ್ಕಲಿಗರ ಉದ್ಧಾರವಾಗುತ್ತದೆ, ಯಡಿಯೂರಪ್ಪ ಬಂದರಷ್ಟೇ ಲಿಂಗಾಯತರ ಪ್ರಗತಿ ಸಾಧ್ಯ, ಸಿದ್ದರಾಮಯ್ಯ ಬಂದರೆ ಕುರುಬರ ಶ್ರೇಯೋಭಿವೃದ್ಧಿಯಾಗುತ್ತದೆ, ಖರ್ಗೆ ಬಂದರೆ ದಲಿತರು ಶ್ರೀಮಂತರಾಗುತ್ತಾರೆ ಎನ್ನಲು ಕರ್ನಾಟಕವೇನು ಒಕ್ಕಲಿಗರು, ಲಿಂಗಾಯತರು, ಕುರುಬರು, ದಲಿತರ ಖಾಸಗಿ ಆಸ್ತಿಯೇ? ಈಡಿಗರು, ಉಪ್ಪಾರರು, ನಾಯ್ಕರು, ಕೊಡವರು, ಬಣಜಿಗರು, ಬಂಟರು ಇನ್ನು ಮುಂತಾದ ಸಣ್ಣಪುಟ್ಟ ಜಾತಿಗಳು ಎಲ್ಲಿಗೆ ಹೋಗಬೇಕು? ಈ ಜನಾಂಗಕ್ಕೆ ಸೇರಿದ ಯಾವ ನಾಯಕರೂ ಮುಖ್ಯಮಂತ್ರಿಯಾಗುವ ಸಾಧ್ಯತೆಯೇ ಇಲ್ಲ. ಹಾಗಂತ ಅವರು ಮತಹಾಕದೆ ಇರಬೇಕಾ?
ನಾವೆಲ್ಲರೂ ಕನ್ನಡಿಗರು ಎಂಬ ಭಾವನೆಯಿಂದ ವೋಟು ಹಾಕುವ ಕಾಲ ಹೊರಟೇ ಹೋಯಿತಾ? ಪ್ರತಿನಿತ್ಯ ಯಾವ ಪತ್ರಿಕೆ ತೆರೆದರೂ, ಯಾವ ಚಾನೆಲ್ ಹಾಕಿದರೂ ಬರೀ ಜಾತಿ ಲೆಕ್ಕಾಚಾರ, ಜಾತಿವಾರು ಮತದಾರರ ಪ್ರಮಾಣದ ಮಾತುಗಳೇ. ಅಭ್ಯರ್ಥಿಯ ಯೋಗ್ಯಾಯೋಗ್ಯತೆಯನ್ನು ಪರಿಗಣಿಸುವುದು ಬಿಟ್ಟು, ಆತನ ಜಾತಿಯ ಆಧಾರದ ಮೇಲೆ ಫಲಿತಾಂಶವನ್ನು ಲೆಕ್ಕಹಾಕುವ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ? ಒಮ್ಮೆ ದೇವರಾಜ ಅರಸರನ್ನು ನೆನಪಿಸಿಕೋ. ಅವರು ಜಾರಿಗೆ ತಂದ “ಉಳುವವನೇ ಭೂಮಿಯ ಒಡೆಯ” ಎಂಬ ನೀತಿಯಿಂದಾಗಿ ಕೂಲಿ ಕಾರ್ಮಿಕನೂ ಭೂಮಿಯ ಒಡೆಯನಾದ. ಸಮಾಜದ ಎಲ್ಲ ಜಾತಿ, ವರ್ಗಗಳ ಶ್ರೇಯೋಭಿವೃದ್ಧಿಯಾಯಿತು. ಅಂತಹ ಅರಸರು ಆಳಿದ ನಾಡನ್ನು ಜಾತಿಯಿಂದ ಒಡೆದವರಾರು? ಇದೇ ದೇವೇಗೌಡರೇ ಅಲ್ಲವೆ?

ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಹಿರಿಯ ಚೇತನ ಹಾಗೂ ಜಾತಿ ಮೀರಿ ನಾಡಿನ ಪ್ರೀತಿ ಗಳಿಸಿರುವ ಶಿವಕುಮಾರಸ್ವಾಮೀಜಿಯವರ ಬಗ್ಗೆ ಕೀಳಾಗಿ ಮಾತನಾಡಿದ ದೇವೇಗೌಡರ ಸುಪುತ್ರ ಕುಮಾರಸ್ವಾಮಿಯವರು ಒಂದು ದೊಡ್ಡ ಸಮುದಾಯದ ಮನನೋಯಿಸಿದರು.
ಅದರ ಪರಿಣಾಮವನ್ನು ಇಂದು ನೋಡುತ್ತಿದ್ದೇವೆ. ದೇವು ಕುಟುಂಬದ ಅಧಿಕಾರದಾಹಕ್ಕೆ ಸಮಾಜದ ಏಕತೆಯೇ ಬಲಿಯಾಗಬೇಕಾಗಿ ಬಂದಿದ್ದು ನಿಜಕ್ಕೂ ದುರದೃಷ್ಟಕರ. ಹೆಗಡೆಗೆ ದ್ರೋಹ ಬಗೆದ ಕಾರಣ ಬ್ರಾಹ್ಮಣರು, ಸಿದ್ದರಾಮಯ್ಯನವರಿಗೆ ಚೂರಿ ಹಾಕಿದ ಕಾರಣ ಕುರುಬರು, ಯಡಿಯೂರಪ್ಪನವರಿಗೆ ಮೋಸ ಮಾಡಿದ ಕಾರಣ ಲಿಂಗಾಯತರು ವಿರುದ್ಧವಾದರು. ದೇವೇಗೌಡರಿಂದಾಗಿ ಒಕ್ಕಲಿಗ ಸಮುದಾಯವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂತು.

ಈ ಮೂರು ಪಕ್ಷಗಳ ಹಗರಣ ನೋಡುತ್ತಿರುವ ಮತದಾರ ಮಾತ್ರ ಈಗಲು ನಿದ್ರೆಯಲ್ಲಿದ್ದಾನೆ.
ಜಾತಿಗಳ ಹೊಡದಾಟಗಳಲ್ಲಿ ಮಗ್ನನಾಗಿ ತನ್ನ ಮತವನ್ನು ಯಾರಿಗೆ ನೀಡಲಿ ಎನ್ನುವ ಗೊಂದಲಕ್ಕೆ ಸಿಕ್ಕು ಪ್ರಭುದ್ಧತೆಯನ್ನು ಮರೆತುಹೋಗಿದ್ದಾನೆ.

ಅಲ್ಪಸಂಖ್ಯಾತರೆನ್ನುವ ನೀತಿಯಡಿ ಮುಸಲ್ಮಾನರ ಉದ್ಧಾರ ಮಾಡುವ ಕಾಂಗ್ರೇಸ್ .

ರಾಮಮಂದಿರದ ಕನಸು ತೋರಿಸುತ್ತ ಹಿಂದೂಗಳ ಬೆಂಬಲ ಬಯಸಿ ಗದ್ದುಗೆಯೇರಲು ಬಯಸುತ್ತಿರುವ ಕಳ್ಳರ ಪಕ್ಷ ಬಿಜೇಪಿ.

ರೈತಾಪಿ ಜನರಲ್ಲಿ ಒಕ್ಕಲಿಗ ಸಮುದಾಯದವರ ಉದ್ಧಾರಕ್ಕೆ ನಿಂತ ಸೂಟಕೇಸ್ ಸಂಸ್ಕೃತಿಯ ಜೆಡಿಎಸ್ ಆಗಿರಲಿ
ಯಾವ ಪಕ್ಷಗಳು ಸಹ ಕರ್ನಾಟಕವನ್ನು ಉದ್ಧಾರ ಮಾಡಲಾರವು!!

ಇಷ್ಟುದ್ದ ಗೀಚಿರೋ ನನ್ನ ಮತ ಯಾರಿಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ನನ್ನ ಉತ್ತರ
ನೀಯತ್ತಿರೋ ಸ್ವತಂತ್ರ ಅಭ್ಯರ್ಥಿಗೆ ಇಲ್ಲದಿದ್ದರೆ ಮತಯಂತ್ರದ ಕೊನೆಯ ಬಟನ್ NOTA

ಜೈ ಹಿಂದ್
ಜೈ ಕರ್ನಾಟಕ ಮಾತೆ

Leave a Reply

Your email address will not be published. Required fields are marked *