ರಾಮ ಮಂದಿರ ನಿರ್ಮಾಣ ಪರವಾಗಿ ನಿಂತ ಶಿಯಾ ವಕ್ಛ್ ಬೋರ್ಡ್ ಅಂತರಾಷ್ಟ್ರೀಯ ಮುಸ್ಲಿಂ ಫತ್ವಾಕ್ಕೆ ತಿರುಗೇಟು.

ಅಯೋಧ್ಯ ಭೂ ವಿವಾದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಗೆ ಒಳಗಾಗಿದೆ. ಇರಾಕ್ ನ ಶಿಯಾ ಧರ್ಮದ ಅಯತೊಲ್ಲಾಹ್ ಅಲಿ ಅಲ್ ಸಿಸ್ತಾನಿ ವಕ್ಛ್ ಬೊರ್ಡ್ ಗೆ ಸೇರಿದ ಆಸ್ತಿಗಳನ್ನು ದೇವಸ್ಥಾನ ನಿರ್ಮಾಣಕ್ಕೆ ಅಥವಾ ಬೇರೆ ಯಾವುದೇ ಕೇಲಸಗಳಿಗೆ ನೀಡಲು ಆಗುವುದಿಲ್ಲ ಎಂದು ಅಂತರಾಷ್ಟ್ರೀಯ ಪತ್ವಾವನ್ನು ಹೊರಡಿಸಿದ್ದಾರೆ.

ಅಯೋಧ್ಯೆಯ ಬಾಬಾರಿ ಮಸೀದಿ ವಿವಾದಿತ ಭೂಮಿ ರಾಮ ಮಂದಿರ ನಿರ್ಮಾಣಕ್ಕೆ ದಾನ ಮಾಡಲಾಗಿದೆಯೆಂದು ಹಲವಾರು ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ಅವರನ್ನು ಗುರಿಯಾಗಿರಿಸಿ ಫತ್ವಾ ಹೊರಡಿಸಲಾಗಿದೆ.

ಇನ್ನು ಅಂತರಾಷ್ಟ್ರೀಯ ಪತ್ವಾದ ಬಗ್ಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶ ಶಿಯಾ ವಕ್ಛ್ ಬೊರ್ಡ್ ಅಧ್ಯಕ್ಷ ವಾಸಿಂ ರಿಜ್ವಿ ಫತ್ವಾದಲ್ಲಿ, ವಕ್ಫ್ ಸ್ವತ್ತು ಶಿಯೈಟ್ಸ್ಗೆ ಸೇರಿದವರು ಎಂದು ಬಾಬರಿ ಮಸೀದಿಯನ್ನು ಷಿಯೈಟ್ ಆಡಳಿತಗಾರನು ನಿರ್ಮಿಸಿದನು ಎಂದು ಇರಾಕ್ ಗುಮಾಸ್ತರು ಹೇಳಿದ್ದಾರೆ. ಮಸೀದಿಯ ನಿರ್ಮಾಣಕ್ಕಾಗಿ ಧ್ವಂಸವಾದ ದೇವಾಲಯದ ಬಗ್ಗೆ ಇರಾಕಿ ಹೈ-ಕ್ಲೆರಿಕ್ಗೆ ತಿಳಿಸಲಾಗಿಲ್ಲ ಎಂದು ರಿಜ್ವಿ ಫತ್ವಾವನ್ನು ತಿರಸ್ಕಾರ ಮಾಡಿದ್ದಾರೆ, ಈ ಸಮಸ್ಯೆಯನ್ನು ಅಂತರಾಷ್ಟ್ರೀಯಗೊಳಿಸುವುದಕ್ಕಾಗಿ ಪಿತೂರಿ ಮಾಡಿದ್ದಾರೆ. ” ಎಂದು ಈ ಸಂಧರ್ಭದಲ್ಲಿ ಹೇಳಿದ್ದಾರೆ‌.

ರಾಮ ದೇವಾಲಯ ವಿಷಯವು ಹಿಂದೂ ಸಮುದಾಯದ ನಂಬಿಕೆಯ ವಿಷಯವಾಗಿದೆ, ಹಿಂದೂಗಳಿಗೆ ಅವರ ಹಕ್ಕನ್ನು ನೀಡಬೇಕು ಮತ್ತು ಮುಸ್ಲಿಮರು ಯಾವುದೇ ತೊಂದರೆ , ನಿರ್ಬಂಧಗಳನ್ನು ಸೃಷ್ಟಿಸಬಾರದು ಎಂದು ಹೇಳಿದರು. ದೇಶದ ಎಲ್ಲಾ ಮುಸ್ಲಿಮರು ತಮ್ಮ ನಿಲುವನ್ನು ವಿರೋಧಿಸಿದರೂ ಶಿಯಾ ಬೋರ್ಡ್ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಶಿಯಾ ವಕ್ಛ್ ಬೋರ್ಡ್ ಅಧ್ಯಕ್ಷ ವಾಸೀಂ ರಿಜ್ವಿ ಹೇಳಿದ್ದಾರೆ.

Leave a Reply