ತಲೆ ಹೊಟ್ಟಿಗೆ ಶ್ಯಾಂಪು ಹಾಕಿ ಕೂದಲನ್ನು ಹಾಳು ಮಾಡಿಕೊಳ್ಳಬೇಡಿ. ಅದಕ್ಕೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

  ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಮಹಿಳೆಯರಿಗೆ ಪಯರುಷರಿಗೆ ಯಾವುದೇ ಬೇಧವಿಲ್ಲದೆ ಬರುವ ಸಮಸ್ಯೆ ಎಂದರೆ ತಲೆಯಲ್ಲಾಗುವ ಹೊಟ್ಟು. ತಲೆಯಲ್ಲಿ ವಿಪರೀತ ಹೊಟ್ಟಾದರೆ ವಿಪರೀತ ತುರಿಕೆ, ಕಜ್ಜಿಗಳಾಗುವುದು, ಇನ್ನೂ ತಲೆಯ ಮೇಲಿನ ಚರ್ಮ ಕೆಂಪಾಗಿ ಉದುರುತ್ತ ಹೋಗುವುದು. ತಲೆಯ ಚರ್ಮ ನಾಜೂಕಾಗಿ ತಯಾರಾಗುವುದರಿಂದ ತುರಿಕೆ ಸಂಧರ್ಭದಲ್ಲಿ ರಕ್ತ ಬರುವುದು ಇದೆ. ಇವೆಲ್ಲ ಸರ್ವೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು.

ಮನೆಯಲ್ಲಿರುವ ವಸ್ತುಗಳ ಸಹಾಯದಿಂದ ಹೊಟ್ಟಿನ ಸಮಸ್ಯೆ ಯಿಂದ ಬಹಳ ಸುಲಭವಾಗಿ ಹೊರ ಬರಬಹುದು. ಮುಖ್ಯವಾಗಿ ಮೊದಲಿಗೆ ಹೊಟ್ಟಿಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಅದರಿಂದ ಸಾಧ್ಯವಾದಷ್ಟು ದೂರ ಮಾಡುವುದು ಒಳಿತು. ಉದಾಹರಣೆಗೆ ಒತ್ತಡಗಳಿಂದ ದೊರವಿರಲು ಪ್ರಯತ್ನಿಸಿ, ಕಲುಷಿತ ವಾತವರಣದಿಂದ ಆದಷ್ಟು ದೂರವಿರಲು ಪ್ರಯತ್ನ ಮಾಡಬೇಕು. ಕೆಲ ಎಚ್ಚರಿಕೆ ತೆಗೆದುಕೊಂಡರೆ ನಿಮ್ಮ ಕೂದಲಿನ ಅರೈಕೆ ಬಹು ಸುಲಭ.

ಇನ್ನೂ ಮುಖ್ಯವಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು ತೆಗೆದುಕೊಂಡು ವಾರಕ್ಕೆ ಒಂದೆರೆಡು ಬಾರಿ ಬಳಕೆ ಮಾಡಿದರೆ ಸಾಕು ನಿಮ್ಮ ಕೂದಲು ಕಪ್ಪಾಗಿ ದೃಢವಾಗಿ ಅರೋಗ್ಯ ದಿಂದ ಹೊಟ್ಟಿನ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು.

ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ನಾಟಿಕೋಳಿಯ ಮೊಟ್ಟೆ ಮತ್ತು ಒಂದು ನಿಂಬೆಹಣ್ಣು ಇದು ಎಲ್ಲರಿಗೂ ಸುಲಭವಾಗಿ ಸಿಗುತ್ತದೆ. ಮೊಟ್ಟೆಯನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿಕೊಳ್ಳಿ ಮತ್ತು ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ಹೀಗೆ ಮಾಡಿಕೊಂಡ ಮಿಶ್ರಣವನ್ನು ತಲೆಯ ಕೂದಲಿನ ಮೂಲಗಳಿಗೆ ತಲುಪುವಂತೆ ಹಚ್ಚಿಕೊಂಡು 4-5 ನಿಮಿಷ ಮಸಾಜ್ ಮಾಡಿಕೊಳ್ಳಿ ಇದಾದ ನಂತರ 30 ನಿಮಿಷಗಳ ಕಾಲ ಕೂದಲನ್ನು ಒಣಗಲು ಬಿಡಿ, ಇದಾದ ನಂತರ ತಣ್ಣೀರಿನಲ್ಲಿ ಚೆನ್ನಾಗಿ ತೊಳೆಯಿರಿ, ಇದು ನಿಮ್ಮ ತಲೆಯ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡುವುದಲ್ಲದೆ, ಕೂದಲನ್ನು ಕಪ್ಪು ಮಾಡುತ್ತದೆ, ಹೀಗೆ ಮನೆಯಲ್ಲಿ ಯೆ ಮಾಡಿಕೊಳ್ಳುವುದರಿಂದ ಕೆಮಿಕಲ್ ಮಿಶ್ರಿತ ಶ್ಯಾಂಪುವಿನಿಂದ ಅಗುವ ತೊಂದರೆಗಳಿಂದ ದೂರವಿರಬಹುದು‌. 

 

Leave a Reply