ಯುವತಿಯ ಕೈ ಹಿಡಿದು ಎಳೆದ ಮುಸ್ಲಿಂ ಯುವಕ , ಭಿನ್ನ ಕೋಮುಗಳ ನಡುವೆ ಘರ್ಷಣೆ. ಲಾಠಿ ಚಾರ್ಜ್.

 ಶಿವಮೊಗ್ಗ ಹಿಂದೂ ಯುವತಿ ಕೈ ಹಿಡುದು ಎಳೆದ ಮುಸ್ಲಿಂ ಯುವಕ ಶಾಂತಿಯಿಂದ ಇದ್ದ ಶಿವಮೊಗ್ಗಕ್ಕೆ ಬೆಂಕಿ ಇಟ್ಟಿದ್ದಾನೆ ಎಂದರೆ ತಪ್ಪಾಗಲಾರದು.

ಶಿವಮೊಗ್ಗದ ಗಾಂಧಿ ಬಜಾರ್ ನ ಕಸ್ತೂರಬಾ ರಸ್ತೆಯಲ್ಲಿ ಚಪ್ಪಲಿ ಕೊಳ್ಳಲು ತೆರೆದಿದ್ದ ವೇಳೆ ಅಂಗಡಿಯಲ್ಲಿ ಕೈ ಹಿಡಿದು ಎಳೆದಿದ್ದಾನೆ ಎಂದು ಅರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎರೆಡು ಕೋಮಿನ ಮಧ್ಯೆ ಘರ್ಷಣೆ ನಡೆದಿದೆ. ವಿಷಯ ತಿಳಿದ ತಕ್ಷಣ ಪರಿಸ್ಥಿತಿ ಕೈ ತಪ್ಪುವ ಮುನ್ನವೆ ಎಚ್ಚೆತ್ತುಕೊಂಡ ಪೋಲಿಸರು ಲಘು ಲಾಠಿ ಪ್ರಹಾರವನ್ನು ಮಾಡಿ, ಎರೆಡು ಗುಂಪುಗಳನ್ನು ಚದುರಿಸಿದ್ದಾರೆ.

ಶಿವಮೊಗ್ಗದ ಜಿಲ್ಲಾ ಪೋಲಿಸ್ ಆಧಿಕಾರಿಯಾದ ಅಭಿನವ್ ಖರೆ ಘಟನೆ ನಡೆದ ಸ್ಥಳದಲ್ಲಿ ಯೆ ಇದ್ದು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ‌.

ಮುಂಜಾಗ್ರತಾ ಕ್ರಮವಾಗಿ ಹಳೇ ಶಿವಮೊಗ್ಗದ ಭಾಗಗಳಲ್ಲಿ ಹೆಚ್ಚಿನ ಪೋಲಿಸರನ್ನು ನಿಯೋಜನೆ ಮಾಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ.

ಘರ್ಷಣೆ ವೇಳೆ ಗಾಯಗೊಂಡ ಬಜರಂಗದಳದ ಕಾರ್ಯಕರ್ತ ಮಾಲತೇಶ್ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

Leave a Reply