ಭಾರತದ ಧ್ವಜವೆಂದು ಪರಾಗ್ವೆ ಧ್ವಜ ಪ್ರಕಟಿಸಿ ರಾಬರ್ಟ್ ವಾದ್ರಾ ಎಡವಟ್ಟು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಆರನೇ ಹಂತದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಮತ ಚಲಾಯಿಸಿ ಟ್ವೀಟ್ ಮಾಡುವಾಗ ಎಡವಟ್ಟೊಂದನ್ನು ಮಾಡಿದ್ದಾರೆ. ಮತ ಚಲಾಯಿಸಿ ಟ್ವಿಟ್ಟರ್ ನಲ್ಲಿ ಸೆಲ್ಫಿಯೊಂದಿಗೆ ಫೋಟೊ ಪ್ರಕಟಿಸಿದ ರಾಬರ್ಟ್ ವಾದ್ರಾ ಅವರು ಪರಾಗ್ವೆ ದೇಶದ ಈಮೊಜಿ ಜೊತೆ ಬರಹವನ್ನು ಪ್ರಕಟಿಸಿದ್ದಾರೆ .ರಾಬರ್ಟ್ ವಾದ್ರಾ ಅವರು ಮಾಡಿರುವ ಟ್ವೀಟ್ ನಲ್ಲಿ “ಮತದಾನ ನಮ್ಮ ಹಕ್ಕು” ನಮ್ಮ ಶಕ್ತಿಯಾಗಿದೆ, ಪ್ರತಿಯೊಬ್ಬರೂ ನಮ್ಮ ಉಜ್ವಲ ಭವಿಷ್ಯದತ್ತ ಗಮನವಿಟ್ಟು ಮತ್ತು ಜಾತ್ಯತೀತ ಮತ್ತು ಸುರಕ್ಷಿತ ದೇಶಕ್ಕಾಗಿ ಮತ ಚಲಾಯಿಸಿ ಎಂದು ಬರೆದಿದ್ದು ಇದರ ಜೊತೆ ಪರಾಗ್ವೆ ದೇಶದ ಇಮೋಜಿಯನ್ನು ಕೂಡ ಹಾಕಿ ಹಾಕಿದ್ದಾರೆ. ಈ ಟ್ವೀಟ್ ನಾದ್ಯಂತ ಬಿಜೆಪಿ ಬೆಂಬಲಿಗರು ಸೇರಿ ಹಲವರು ರಾಬರ್ಟ್ ವಾದ್ರಾ ಅವರ ಕಾಲೆಳೆದಿದ್ದು ನೀವು ಪರಾಗ್ವೆ ದೇಶದಲ್ಲಿ ಮತ ಚಲಾಯಿಸಿದ್ದಾರಾ ಎಂದು ಕಾಲೆಳೆದಿದ್ದಾರೆ.ನಂತರ ರಾಬರ್ಟ್ ವಾದ್ರಾ ಅವರು ತಾವು ಮಾಡಿದ ಎಡವಟ್ಟನ್ನು ಸರಿಪಡಿಸಿ ಹೊಸದಾಗಿ ಇನ್ನೊಂದು ಟ್ವೀಟ್ ಅನ್ನು ಪ್ರಕಟಿಸಿದ್ದಾರೆ.

Leave a Reply