ಎಸ್ಪಿ ಬಿಎಸ್ಪಿ ರ್ಯಾಲಿಗೆ ನುಗ್ಗಿದ ಗೂಳಿ :ಯೋಗಿ ಆದಿತ್ಯನಾಥ್ ಏನಂದರು ಗೊತ್ತೇ

ಉತ್ತರ ಪ್ರದೇಶದ ಕನೂಜಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಮೈತ್ರಿ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಜಂಟಿಯಾಗಿ ರ್ಯಾಲಿ ನಡೆಸುತ್ತಿದ್ದ ವೇಳೆ ಗೂಳಿಯೊಂದು ನುಗ್ಗಿ ಹಲವರನ್ನು ಗಾಯಗೊಳಿಸಿತ್ತು. ಈ ಸಂಬಂಧ ಅಖಿಲೇಶ್ ಯಾದವ್ ಅವರು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಹಲವು ಬಾರಿ ಕಿಡಿಕಾರಿದ್ದರು .ಉತ್ತರ ಪ್ರದೇಶದಲ್ಲಿ ಬೀದಿ ದನಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ ಯೋಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇನ್ನು ರೈತರ ರಕ್ಷಣೆ ಹೇಗೆ ಮಾಡುತ್ತದೆ ಎಂದು ಹೇಳಿದ್ದರು .ಈ ಸಂಬಂಧ ಇಂದು ಖುಷಿ ನಗರದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ತಿರುಗೇಟು ನೀಡಿದ ಯೋಗಿ ಆದಿತ್ಯನಾಥ್ ಅವರು ಗೂಳಿ ನಂದಿಯ ಅವತಾರದಲ್ಲಿ ಸಮಾಜವಾದಿ ಪಕ್ಷದ ರ್ಯಾಲಿಗೆ ನುಗ್ಗಿದೆ. ಅದು ಕೇಳುತ್ತಿದೆ ನಿಮ್ಮ ಸ್ನೇಹಿತರಾದ ಗೋ ಹಂತಕರು ಎಲ್ಲಿದ್ದಾರೆ ನಾನು ಅವರಿಗೆ ಬುದ್ಧಿ ಕಲಿಸಲು ಬಂದಿದ್ದೇನೆ .ಆದರೆ ನಾನು ನಂದಿ ಬಾಬಾಗೆ ಹೇಳಿದ್ದೇನೆ ಈ ಬಾರಿ ಅವರನ್ನು ಕ್ಷಮಿಸಿ ಬಿಡು ಸ್ಥಳೀಯ ಜಿಲ್ಲಾಡಳಿತ ಎಲ್ಲವನ್ನೂ ನೋಡಿಕೊಳ್ಳುತ್ತಿದೆ. ಚುನಾವಣೆ ಮುಗಿದ ನಂತರ ಅವರಿಗೆ ಬುದ್ಧಿ ಕಲಿಸುವ ಎಂದು ಹಾಸ್ಯಾಸ್ಪದ ರೀತಿಯಲ್ಲಿ ಅಖಿಲೇಶ್ ಯಾದವ್ ಅವರಿಗೆ ಯೋಗಿ ಆದಿತ್ಯನಾಥ್ ಅವರು ಟಾಂಗ್ ನೀಡಿದ್ದಾರೆ .

Leave a Reply