ಹಿಂದು ಉಗ್ರ ಹೇಳಿಕೆ – ಕಮಲಹಾಸನ್ ನಾಲಿಗೆಯನ್ನು ಕಿತ್ತೆಸೆಯಬೇಕು ಎಂದ ತಮಿಳುನಾಡು ಸಚಿವ

ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂದು ನಾಥುರಾಮ್ ಗೋಡ್ಸೆಯನ್ನು ಗುರಿಯಾಗಿಸಿ ಹೇಳಿಕೆ ನೀಡಿದ ನಟ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ತಮಿಳುನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ ಕೆಂಡಕಾರಿದ್ದು ಕಮಲಹಾಸನ್ ಅವರ ನಾಲಿಗೆಯನ್ನು ಕಿತ್ತೆಸೆಯಬೇಕೆಂಬ ಹೇಳಿದ್ದಾರೆ .ಅಲ್ಲದೆ ಕಮಲಹಾಸನ್ ಅವರ ರಾಜಕೀಯ ಪಕ್ಷಕ್ಕೆ ನಿಷೇಧ ಹೇರಿ ಕಮಲಹಾಸನ್ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ .ಚುನಾವಣಾ ವೋಟ್ ಬ್ಯಾಂಕ್ ದೃಷ್ಟಿಯಿಂದ ಕಮಲಹಾಸನ್ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಹೇಳಿದ್ದಾರೆ .ಭಾನುವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಮಲಹಾಸನ್ ಅವರು ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದರು.

Leave a Reply