ಮಮತಾ ಬ್ಯಾನರ್ಜಿ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕರನ್ನು ಭೇಟಿಯಾದ ನರೇಂದ್ರ ಮೋದಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿ ಜೈಲು ಸೇರಿ ಬಿಡುಗಡೆಯಾಗಿದ್ದ ಯುವಕರನ್ನು ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯಾಗಿದ್ದಾರೆ.ನರೇಂದ್ರ ಮೋದಿಯವರ ಈ ಕಾರ್ಯವೈಖರಿಗೆ ಬಲಪಂಥೀಯ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ .ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಮಿಂದನಪುರ್ ಬಳಿ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು ಇದರಿಂದ ಕೆರಳಿದ ಮಮತಾ ಬ್ಯಾನರ್ಜಿಯವರು ತಮ್ಮ ಕಾರಿನಿಂದ ಕೆಳಗಿದ್ದು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದರು .ನಂತರದ ಬೆಳವಣಿಗೆಯಲ್ಲಿ ಬಂಗಾಲ ಪೊಲೀಸರು ಈ ಮೂರು ಯುವಕರನ್ನು ಬಂಧಿಸಿದ್ದರು .

Leave a Reply

Your email address will not be published. Required fields are marked *