ಪಶ್ಚಿಮ ಬಂಗಾಳ ಗಲಭೆ – ಬಿಜೆಪಿಯಿಂದ ಜಂತರ್ ಮಂತರ್ ನಲ್ಲಿ ಮೌನ ಪ್ರತಿಭಟನೆ

ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಅಮಿತ್ ಶಾ ಅವರ ರೋಡ್ ಶೋ ಸಂದರ್ಭ ಟಿಎಂಸಿ ಬೆಂಬಲಿಗರು ನಡೆಸಿದ ಅಟ್ಟಹಾಸವನ್ನು ಖಂಡಿಸಿ ಇಂದು ಬಿಜೆಪಿಯ ಪ್ರಮುಖ ನಾಯಕರು ದೆಹಲಿಯ ಜಂತರ್ ಮಂತರ್ನಲ್ಲಿ ಮೌನ ಪ್ರತಿಭಟನೆ ನಡೆಸಿದರು .ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜಿತೇಂದ್ರ ಸಿಂಗ್ ವಿಜಯ್ ಗೋಯಲ್ ಮತ್ತು ಹರ್ಷವರ್ಧನ್ ಅವರು ಕಪ್ಪು ಪಟ್ಟಿ ಧರಿಸಿ ಬಂಗಾಳ ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಕರ ಪತ್ರವನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದ್ದಾರೆ .ಈ ಸಂದರ್ಭ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ .ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಜಾತಂತ್ರ ವ್ಯವಸ್ಥೆಯನ್ನು ಗಾಳಿಗೆ ತೂರಿದ್ದಾರೆ ನಮ್ಮ ರಾಷ್ಟ್ರೀಯ ವರಿಷ್ಠರ ಚುನಾವಣಾ ರ್ಯಾಲಿಯಲ್ಲಿ ಗಲಭೆ ಏರ್ಪಡಲು ಮಮತಾ ಬ್ಯಾನರ್ಜಿ ನೇರ ಕಾರಣ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಸಿಆರ್ಪಿಎಫ್ ಪಡೆಗಳು ಜತೆಗಿಲ್ಲದಿದ್ದರೆ ಅಮಿತ್ ಶಾ ಅವರು ಹಿಂದಿರುಗಲು ಸಾಧ್ಯವಿರಲಿಲ್ಲ ಎಂದಿದ್ದಾರೆ.ಚುನಾವಣೆಯ ಸೋಲಿನ ಭಯದಿಂದ ಮಮತಾ ಬ್ಯಾನರ್ಜಿಯವರು ತಮ್ಮ ಕಾರ್ಯಕರ್ತರಿಗೆ ಹಿಂಸಾಚಾರ ನಡೆಸಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ .ಇನ್ನು ಕಾಲೇಜ್ ಕ್ಯಾಂಪಸ್ಸಿನೊಳಗೆ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸ ಕುರಿತು ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್ ಅವರು ಕಾಲೇಜ್ ಕ್ಯಾಂಪಸ್ಸಿನ ಗೇಟಿಗೆ ಬೀಗ ಹಾಕಲಾಗಿತ್ತು. ಬಿಜೆಪಿ ಕಾರ್ಯಕರ್ತರು ಈ ಗೇಟಿನ ಒಳಗೆ ಪ್ರವೇಶಿಸಿಲ್ಲ ಹಾಗಾದರೆ ಪ್ರತಿಮೆ ಹೇಗೆ ಧ್ವಂಸಗೊಂಡಿತು ಇದರ ಹಿಂದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿದ್ದಾರೆ .

Leave a Reply