ಮೊಹರಂ ಸಮಯವನ್ನು ಬದಲಿಸಿ ದುರ್ಗಾ ಪೂಜೆಯ ಸಮಯವನ್ನಲ್ಲ ಪಶ್ಚಿಮ ಬಂಗಾಳದಲ್ಲಿ ಯೋಗಿ ಆದಿತ್ಯನಾಥ್

ಮೇ 19 ರಂದು ನಡೆಯಲಿರುವ ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಯೋಗಿ ಆದಿತ್ಯನಾಥ್ ಅವರ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ನಡುವೆಯೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪಶ್ಚಿಮ ಬಂಗಾಲದ ಬಾರಸತ್ ನಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.ಮಮತಾ ಸರ್ಕಾರ ಅಲ್ಪಸಂಖ್ಯಾತರ ವೋಟ್ ವೋಟ್ ಬ್ಯಾಂಕ್ಗಾಗಿ ರಾಜಕೀಯ ಮಾಡುತ್ತಿದೆ .ಇಡೀ ದೇಶದಲ್ಲಿ ದುರ್ಗಾ ಪೂಜೆ ಮತ್ತು ಮೊಹರಂ ಒಂದೇ ದಿನ ನಡೆಯುತ್ತದೆ ಉತ್ತರ ಪ್ರದೇಶದಲ್ಲಿ, ಒಮ್ಮೆ ಅಧಿಕಾರಿಯೊಬ್ಬರು ದುರ್ಗಾ ಪೂಜೆಯ ಸಮಯ ಬದಲಿಸಲು ಅನುಮತಿ ಕೇಳಿದ್ದರು, ನಾನು ಹೇಳಿದೆ ದುರ್ಗಾ ಪೂಜೆಯ ಸಮಯ ಬದಲಾವಣೆ ಮಾಡಲು ಸಾಧ್ಯವಿಲ್ಲ ನಿಮಗೆ ಸಮಯ ಬದಲು ಮಾಡಲು ಇದ್ದರೆ ಮೊಹರಮ್ ಮೆರವಣಿಗೆಯ ಸಮಯ ಬದಲಾಯಿಸಿ ಎಂದು ಹೇಳಿದ್ದೆ ಎಂದರು.ಯೋಗಿ ಆದಿತ್ಯನಾಥ ಅವರ ಪೂಲ್ ಬಾಗ್ ಪ್ರದೇಶದಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿ ವೇದಿಕೆಯನ್ನು ಟಿಎಂಸಿ ಬೆಂಬಲಿಗರು ಧ್ವಂಸಗೊಳಿಸಿದ್ದ ಹಿನ್ನಲೆಯ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ನಿಯೋಜಿತ ಎಲ್ಲಾ ರ್ಯಾಲಿಯಲ್ಲಿ ಪಾಲ್ಗೊಳ್ಳಿ ವಾಪಸ್ ಬರಬೇಡಿ ಎಂದು ಅಮಿತ್ ಷಾ ಸೂಚಿಸಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Leave a Reply