ಆರೆಸ್ಸೆಸ್ ಕಾರ್ಯಕರ್ತರು ಉಳಿದವರಿಗೆ ಮಾದರಿ ಎಂದ ಎನ್ಸಿಪಿ ನಾಯಕ ಶರದ್ ಪವಾರ್

ಲೋಕಸಭಾ ಚುನಾವಣೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಪರಿಶ್ರಮದಿಂದಲೇ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದೆ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ .ಮತದಾರರ ಬಳಿ ತೆರಳಿ ಅವರ ಮನವೊಲಿಸುವ ವಿಷಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಉಳಿದವರಿಗೆ ಮಾದರಿ ಅವರಿಂದ ನಾವು ಕಲಿಯುವುದು ಹಲವಿದೆ ಎಂದು ಗುರುವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ತಿಳಿಸಿದ್ದಾರೆ .ಆರೆಸ್ಸೆಸ್ ತತ್ತ್ವ ಆದರ್ಶಗಳನ್ನು ನಾವು ಗೌರವಿಸ ಬೇಕಾಗಿಲ್ಲ ಆದರೆ ಅವರ ಪರಿಶ್ರಮವನ್ನು ನಾವು ಗೌರವಿಸಬೇಕಿದೆ ಲೋಕಸಭಾ ಚುನಾವಣಾ ಸೋಲಿನಿಂದ ನಮ್ಮ ಕಾರ್ಯಕರ್ತರು ಎದೆಗುಂದುವ ಅಗತ್ಯ ಇಲ್ಲ ಸೋಲಿನ ಅನುಭವದಿಂದ ಪಾಠ ಕಲಿತು ಮುಂದಿನ ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳಬೇಕಿದೆ ಎಂದು ಶರದ್ ಪವಾರ್ ಕರೆ ನೀಡಿದ್ದಾರೆ .

Leave a Reply

Your email address will not be published. Required fields are marked *