ಮಹಾಭಾರತವನ್ನು ತುಳುಕು ಹಾಕಿ ಭಾರತದ ಮಾಧ್ಯಮದ ಮೇಲೆ ಕಿಡಿ ಕಾರಿದ ಪಾಕಿಸ್ತಾನ ಸಚಿವನ ಬಾಯಿ ಮುಚ್ಚಿಸಿದ ಬಿಜೆಪಿ ವಕ್ತಾರ

ಮೊದಲ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರು ಯೋಧರ ಬಲಿದಾನದ ಲಾಂಛನದ ಗ್ಲೌಸ್ ಧರಿಸಿ ಸುದ್ದಿಯಾಗಿದ್ದರು .ಧೋನಿಯವರು ಧರಿಸಿದ ಗ್ಲೌಸ್ ಮೇಲೆ ಕೆಂಗಣ್ಣು ಇಟ್ಟ ಐಸಿಸಿ ಅಂತಹ ಗ್ಲೌಸ್ ಧರಿಸಬೇಡಿ ಎಂದು ಬಿಸಿಸಿಐಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯರು ದೇಶದಾದ್ಯಂತ ಧೋನಿ ಮತ್ತು ಬಿಸಿಸಿಐ ಪರ ಬೆಂಬಲ ವ್ಯಕ್ತಪಡಿಸಿದ್ದು ಐಸಿಸಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಇನ್ನು ಐಸಿಸಿ ನಡೆಗೆ ಭಾರತದ ಮಾಧ್ಯಮದಲ್ಲಿ ನಡೆಯುತ್ತಿದ್ದ ಚರ್ಚೆಯ ಬಗ್ಗೆ ಪಾಕಿಸ್ತಾನಿ ಸಚಿವರೊಬ್ಬರು ಮಹೇಂದ್ರ ಧೋನಿಯವರು ಇಂಗ್ಲೆಂಡಿಗೆ ಕ್ರಿಕೆಟ್ ಆಡಲು ಹೊರಟಿದ್ದಾರೆ ಹೊರತು ಮಹಾಭಾರತಕ್ಕೆ ಅಲ್ಲ, ಭಾರತದ ಮಾಧ್ಯಮಗಳು ಯುದ್ಧವನ್ನು ಕಾದು ನೋಡುತ್ತಿದ್ದಾರೆ ಇವರನ್ನು ಸಿರಿಯಾ ಅಫ್ಘಾನಿಸ್ತಾನ ಕಡೆಗೆ ಕಳುಹಿಸಬೇಕು ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಪಾಕಿಸ್ತಾನಿ ಕ್ರಿಕೆಟಿಗರು ಮೈದಾನದಲ್ಲಿ ನಮಾಜ್ ಮಾಡುವ ಫೋಟೋವನ್ನೂ ಹಂಚಿಕೊಂಡು ಇವರೇನು ಮಸೀದಿ ಕಟ್ಟಲು ಹೋಗಿದ್ದಾರೆಯೇ ಎಂದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *