ಕರ್ನಾಟಕದಲ್ಲಿ ತಯಾರಿಸಲ್ಪಟ್ಟ ಶ್ರೀರಾಮನ ಪ್ರತಿಮೆಯನ್ನು ಅನಾವರಣ ಮಾಡಿದ ಯೋಗಿ ಆದಿತ್ಯನಾಥ್ (ವಿಡಿಯೋ )

ಕರ್ನಾಟಕದಲ್ಲಿ ತಯಾರಿಸಲ್ಪಟ್ಟ ಶ್ರೀರಾಮನ ಪ್ರತಿಮೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಯೋಧ್ಯೆಯ ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಅನಾವರಣಗೊಳಿಸಿದ್ದಾರೆ .ಏಳು ಅಡಿ ಎತ್ತರದ ಬೀಟೆ ಮರದಿಂದ ತಯಾರಾದ ಮೂರ್ತಿಯನ್ನು ಉತ್ತರ ಪ್ರದೇಶ ಸರ್ಕಾರ35 ಲಕ್ಷ ನೀಡಿ ಖರೀದಿಸಿತ್ತು.ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಶ್ರೀರಾಮ ಹಾಗೂ ಸೀತಾದೇವಿಯರ 2,500ಕ್ಕೂ ಹೆಚು ವಿಗ್ರಹಗಳು, ಪ್ರತಿಮೆಗಳಿದ್ದರೂ ಕೋದಂಡರಾಮ ಪ್ರತಿಮೆ ಇರಲಿಲ್ಲ. ಇದೇ ಕಾರಣದಿಂದ ಉತ್ತರ ಪ್ರದೇಶ ಸರ್ಕಾರ ಕರ್ನಾಟಕದಿಂದ ಈ ವಿಶೇಷ ಪ್ರತಿಮೆಯನ್ನು ಖರೀದಿಸಿ ಇದೀಗ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಾಗಿ ಇರಿಸಿದೆ.

Leave a Reply

Your email address will not be published. Required fields are marked *