ಮಮತಾ ಬ್ಯಾನರ್ಜಿ ನಿವಾಸಕ್ಕೆ ಸುನಾಮಿ ಮಾದರಿ ತಲುಪುತ್ತಿದೆ ಜೈ ಶ್ರೀರಾಮ್ ಅಂಚೆ ಕಾರ್ಡ್ ಗಳು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ದೇಶದೆಲ್ಲೆಡೆ ಆರಂಭಿಸಿದ ಜೈ ಶ್ರೀರಾಮ್ ಉಲ್ಲೇಖವಿರುವ ಅಂಚೆ ಕಾರ್ಡ್ ಅಭಿಯಾನಕ್ಕೆ ಭಾರಿ ಜನ ಸ್ಪಂದನೆ ದೊರೆತಿದ್ದು, ಇದು ಬಂಗಾಳದ ಅಂಚೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.ಉತ್ತರ ಕೋಲ್ಕತ್ತಾದ ಕಾಳಿ ಘಾಟ್ನ ಅಂಚೆ ಕಚೇರಿಯ ಸಿಬ್ಬಂದಿ ಈಗ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದು ಸಾಮಾನ್ಯವಾಗಿ ಮಮತಾ ಅವರ ವಿಳಾಸಕ್ಕೆ ಹೆಚ್ಚೆಂದರೆ ನಲವತ್ತು ಪತ್ರಗಳು ಬರುತ್ತಿದ್ದವು ಆದರೆ ಇದೀಗ ಒಂದು ದಿನಕ್ಕೆ ಸುನಾಮಿ ಮಾದರಿ ಪೋಸ್ಟ್ ಕಾರ್ಡ್ ಗಳು ಹರಿದು ಬರುತ್ತಿದೆ. ರೈಲ್ವೆ ಮೇಲ್ ಸರ್ವಿಸ್ ಮುಖಾಂತರ ಒಂದೇ ದಿನಕ್ಕೆ 4500 ಪೋಸ್ಟ್ ಕಾರ್ಡ್ಗಳು ವರ್ಗೀಕರಿಸಿ ಅವನ್ನು ಅಂಚೆ ಕಚೇರಿಗೆ ರವಾನಿಸಲಾಗಿದೆ.ದಿನಕ್ಕೆ ಸಾವಿರಾರು ಲೆಕ್ಕದಲ್ಲಿ ಬರುತ್ತಿರುವ ಪೋಸ್ಟ್ ಕಾರ್ಡ್ ಗಳನ್ನು ಮಮತಾ ಅವರ ಕಚೇರಿಗೆ ತಲುಪಿಸುವುದೇ ಪೋಸ್ಟ್ ಅಂಚೆ ಕಚೇರಿಯ ಸಿಬ್ಬಂದಿಯ ತಲೆನೋವಾಗಿ ಪರಿಣಮಿಸಿದೆ.ಮಮತಾ ಬ್ಯಾನರ್ಜಿಯವರು ಜೈ ಶ್ರೀರಾಮ್ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಂಡ ಪ್ರತಿಯಾಗಿ ಬಿಜೆಪಿ ಈ ಅಭಿಯಾನ ನಡೆಸುತ್ತಿದೆ.

Leave a Reply

Your email address will not be published. Required fields are marked *