ದಯಮಾಡಿ ಮಾತುಕತೆಗೆ ಬನ್ನಿ ಎಂದು ಗೋಗೆರೆದ ಇಮ್ರಾನ್ ಖಾನ್

ಆರ್ಥಿಕವಾಗಿ ಸಾಮಾಜಿಕವಾಗಿ ತತ್ತರಿಸಿ ಹೋಗಿರುವ ಪಾಕಿಸ್ತಾನ ಭಾರತದೊಡನೆ ಮಾತುಕತೆ ನಡೆಸಲು ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ .ಜಮ್ಮು ಕಾಶ್ಮೀರ ಸೇರಿ ಭಾರತ ಪಾಕ್ ನಡುವಿನ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿ ಪಡಿಸಿಕೊಳ್ಳೋಣ ಎಂದು ಎರಡನೇ ಬಾರಿ ಮಾತುಕತೆಗೆ ಇಮ್ರಾನ್ ಖಾನ್ ದುಂಬಾಲು ಬಿದ್ದಿದ್ದಾರೆ.ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತ ಏಷ್ಯಾ ಉಪಖಂಡಗಳ ಮತ್ತು ಬ್ರಿಕ್ಸ್ ನ ಪ್ರಮುಖ ರಾಷ್ಟ್ರಗಳಿಗೆ ಆಹ್ವಾನಿಸಿದ್ದರೂ ಪಾಕಿಸ್ತಾನಕ್ಕೆ ಆಹ್ವಾನ ನೀಡದೆ ಜಾಗತಿಕವಾಗಿ ಪಾಕಿಸ್ತಾನವನ್ನು ಭಾರತ ಮೂಲೆಗುಂಪು ಮಾಡಿತ್ತು .ಅಲ್ಲದೆ ಮುಂದಿನ ವಾರ ಪಾಕಿಸ್ತಾನದಲ್ಲಿ ನಡೆಯುವ ಬ್ರಿಕ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ರೀತಿಯ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಬೆದರಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಮಾತುಕತೆ ಪ್ರಸ್ತಾಪವನ್ನು ಮುಂದಿಟ್ಟಿದೆ.ಪಾಕಿಸ್ತಾನದ ಪತ್ರದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್ ಖಚಿತ ಪಡಿಸಿದ್ದು ಉಭಯ ದೇಶಗಳ ನಡುವೆ ಮಾತುಕತೆ ನಡೆಯುವ ಬಗ್ಗೆ ಸ್ಪಷ್ಟನೆ ಮಾತ್ರ ಈ ವರೆಗೆ ನೀಡಿಲ್ಲ,

Leave a Reply

Your email address will not be published. Required fields are marked *