(Video) ಟಾಯ್ಲೆಟ್‌ ಎಂದು ವಿಮಾನದ ನಿರ್ಗಮನ ದ್ವಾರ ತೆರೆದ ಮಹಿಳೆ

ಇಸ್ಲಾಮಾಬಾದ್: ಪಾಕಿಸ್ತಾನದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಟಾಯ್ಲೆಟ್‌ಗೆ ಹೋಗುವ ಆತುರದಲ್ಲಿ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಆತಂಕ ಸೃಷ್ಟಿಸಿದ ಪ್ರಸಂಗ ಜರುಗಿದೆ.

ಮ್ಯಾಂಚೆಸ್ಟರ್‌ನಿಂದ ಇಸ್ಲಾಮಾಬಾದ್‌ಗೆ ಬರುತ್ತಿದ್ದ ವಿಮಾನ ರನ್‌ವೇನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಳಿಕ ವಿಮಾನವನ್ನು ನಿಲ್ಲಿಸಲಾಗಿದೆ. ಅಲ್ಲದೇ 40ಪ್ರಯಾಣಿಕರನ್ನು ವಿಮಾನದಿಂದ ಲಗೇಜ್‌ ಸಹಿತ ಇಳಿಸಿ ತಪಾಸಣೆ ಮಾಡಿದ್ದರಿಂದ ಪ್ರಯಾಣ ಸುಮಾರು 7ಗಂಟೆಯಷ್ಟು ವಿಳಂಬಗೊಂಡಿದೆ

Leave a Reply

Your email address will not be published. Required fields are marked *