ಕಾಲೇಜು ಕ್ಯಾಂಪಸ್ ಗಳಲ್ಲಿ ದೇಶದ್ರೋಹಿ ಚಟುವಟಿಕೆ ನಡೆದರೆ ಕಠಿಣ ಕ್ರಮಕೈಗೊಳ್ಳುವ ಕಾನೂನು ಜಾರಿಗೆ ತಂದ ಉತ್ತರ ಪ್ರದೇಶ ಸರ್ಕಾರ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದಾದ್ಯಂತ ಕಾಲೇಜ್ ಕ್ಯಾಂಪಸ್ನಲ್ಲಿ ದೇಶದ್ರೋಹ ಚಟುವಟಿಕೆ ನಡೆದರೆ ಕಠಿಣ ಕಾನೂನು ಕ್ರಮ ಜರುಗಿಸುವ ಕಾನೂನನ್ನು ಜಾರಿಗೆ ತಂದಿದೆ .ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಈ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ರಾಜ್ಯದ ಎಲ್ಲಾ ಕಾಲೇಜುಗಳು ಈ ಕಾನೂನಿನ ಅಡಿ ಒಳಪಡಲಿದೆ ಎಂದು ಇಂಡಿಯಾ ಟುಡೇ ವರದಿಗಳು ತಿಳಿಸಿವೆ .ಜಾರಿ ಮಾಡಿದ ಆದೇಶವನ್ನು ಪಾಲಿಸಲು ವಿಫಲವಾದರೆ ಅಂತ ವಿಶ್ವವಿದ್ಯಾನಿಲಯಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ರಾಷ್ಟ್ರೀಯತೆ ,ಜಾತ್ಯತೀತತೆ ಮತ್ತು ಒಳ್ಳೆಯ ನಂಬಿಕೆ ಹುಟ್ಟು ಹಾಕುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ .ಇನ್ನು ಯೋಗಿ ಆದಿತ್ಯನಾಥ ನೇತೃತ್ವದ ಸಚಿವ ಸಂಪುಟದ ಈ ನಿರ್ಧಾರದ ಬಗ್ಗೆ ಎಡಪಂಥೀಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು ಇದು ವಾಕ್ ಸ್ವಾತಂತ್ರ್ಯವನ್ನು ತಡೆ ಒಡ್ಡುವ ಹುನ್ನಾರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ .ಈ ಕಾನೂನಿನಿಂದ ತುಕಡೆ ತುಕಡೆ ಘೋಷಣೆ ಕೂಗುವ ಜನರು ಜೈಲು ಪಾಲಾಗಿದ್ದಾರೆ ಎಂದು ಇನ್ನು ಹಲವರು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *