ಒಂದು ದೇಶ ಒಂದು ಚುನಾವಣೆ : ಬೆಂಬಲ ಸೂಚಿಸಿದ ಪ್ರಮುಖ ಪಕ್ಷಗಳು

ಕೇಂದ್ರದಲ್ಲಿ ನೂತನವಾಗಿ ಆಯ್ಕೆಯಾದ ಮೋದಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪವನ್ನು ಸರ್ವಪಕ್ಷಗಳ ಸಭೆಯಲ್ಲಿ ಮಂಡಿಸಿದೆ .ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್, ಬಿಎಸ್ಪಿ ಎಸ್ಪಿ, ಡಿಎಂಕೆ ಮತ್ತು ಟಿಎಂಸಿ ಗೈರಾದರೆ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯು, ಬಿಜೆಡಿ ಪ್ರಸ್ತಾವನೆಯನ್ನು ಸ್ವಾಗತಿಸಿದೆ. ಅಲ್ಲದೆ ವೈಎಸ್ಆರ್ ಕಾಂಗ್ರೆಸ್ ಕೂಡ ಈ ಪ್ರಸ್ತಾವನೆಯನ್ನು ಸ್ವಾಗತಿಸಿದೆ ಎಂದು ವರದಿಯಾಗಿದೆ .ಇನ್ನು ಈ ಪ್ರಸ್ತಾವನೆಗೆ ಕೆಲವು ಪಕ್ಷಗಳು ವಿರೋಧ ವ್ಯಕ್ತ ಪಡಿಸಿದ್ದರಿಂದ ಸಮಗ್ರ ಅಧ್ಯಯನಕ್ಕಾಗಿ ಸಮಿತಿ ರಚಿಸಲಾಗಿದ್ದು, ಒಂದು ವೇಳೆ ದೇಶದಲ್ಲಿ ಏಕಕಾಲ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆ ನಡೆದರೆ ಕೋಟ್ಯಾಂತರ ರೂಪಾಯಿ ಪೋಲಾಗುವುದನ್ನು ತಡೆಯಬಹುದು. ಅಲ್ಲದೇ ನೀತಿ ಸಂಹಿತೆ ಮುಂತಾದ ಕಾರಣಗಳಿಂದ ಉಂಟಾಗುವ ಅಭಿವೃದ್ಧಿಯ ಅಡಚಣೆಯನ್ನು ನಿವಾರಿಸಬಹುದು .

Leave a Reply

Your email address will not be published. Required fields are marked *