ಸೇನಾ ಶಾಲೆಗೆ ಹುತಾತ್ಮ ಲಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಹೆಸರಿಟ್ಟು ಗೌರವ

ಶ್ರೀನಗರ: ಹುತಾತ್ಮ ವೀರಯೋಧ ಲಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರ ನೆನಪಿಗೆ ಜಮ್ಮು ಕಾಶ್ಮೀರದ ಸೇನಾ ಶಾಲೆಗೆ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಗಿದೆ .ಕುಂದನ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಹುತಾತ್ಮ ಲಾನ್ಸ್ ನಾಯಕ್ ನಜೀರ್ ಅವರ ಪತ್ನಿಯನ್ನು ಬರಮಾಡಿಕೊಂಡರು.2018 ನವೆಂಬರ್ ತಿಂಗಳಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ. ವಿಶೇಷ ಎಂದರೆ ಸೇನೆಗೆ ಸೇರುವ ಮೊದಲು ಇವರು ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ,ನಂತರ ದೇಶ ಸೇವೆ ಮಾಡಲು ಸೇನೆ ಸೇರ್ಪಡೆ ಗೊಂಡಿದ್ದರು .ಕಳೆದ ಗಣರಾಜ್ಯೋತ್ಸವ ಸಂದರ್ಭ ಇವರಿಗೆ ಮರಣೋತ್ತರ ಅಶೋಕ ಚಕ್ರ ನೀಡಲಾಗಿತ್ತು .

Leave a Reply

Your email address will not be published. Required fields are marked *