ನರೇಂದ್ರ ಮೋದಿಯವರನ್ನು ಭೇಟಿಯಾದ ಸುಮಲತಾ ಅಂಬರೀಶ್

ನವದೆಹಲಿ : ಗುರುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಪಕ್ಷದ ಸಂಸದರಿಗೆ ಏರ್ಪಡಿಸಿದ ಭೋಜನ ಕೂಟ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಭಾಗಿಯಾಗಿದ್ದರು .ಈ ಭೋಜನ ಕೂಟದಲ್ಲಿ ಪ್ರಧಾನಿ ಜೊತೆ ಸುಮಲತಾ ಅಂಬರೀಶ್ ಅವರು ಉಭಯ ಕುಶಲೋಪರಿ ನಡೆಸಿದ್ದಾರೆ.ಲೋಕಸಭಾ ಚುನಾವಣಾ ಪ್ರಚಾರದ ಸಮಯವೂ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಶ್ರಮಿಸಿ ಎಂದು ಕಾರ್ಯಕರ್ತರಿಗೆ ನರೇಂದ್ರ ಮೋದಿಯವರು ಕರೆ ನೀಡಿದ್ದರು .ಇನ್ನು ಸರ್ವಪಕ್ಷಗಳ ಭೋಜನ ಕೂಟದಲ್ಲಿ ಕೇವಲ ಸಸ್ಯಾಹಾರಿ ತಿನಿಸುಗಳಿದ್ದು , ವಿವಿಧ ಪಕ್ಷಗಳ ಸಂಸದರು ಪ್ರಧಾನಿ ಜೊತೆ ಮುಕ್ತವಾಗಿ ಸಂವಾದ ನಡೆಸಿದ್ದಾರೆ .

Leave a Reply

Your email address will not be published. Required fields are marked *