ಅಮೇಠಿ :ಗರ್ಭಿಣಿ ಮಹಿಳೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ ಸ್ಮೃತಿ ಇರಾನಿ

ಅಮೇಠಿ : ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ತಮ್ಮ ಎರಡು ದಿನದ ಕ್ಷೇತ್ರ ಭೇಟಿ ಸಂದರ್ಭ ಗರ್ಭಿಣಿ ಮಹಿಳೆಯೊಬ್ಬರಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ .ಕಳೆದ ತಿಂಗಳು ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಸಂದರ್ಭ ಗರ್ಭಿಣಿ ಮಹಿಳೆಯೊಬ್ಬರು ಅಂಬ್ಯುಲೆನ್ಸ್ ಗಾಗಿ ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ನು ಪಡೆದ ಕೂಡಲೇ ತಮ್ಮ ಬೆಂಗಾವಲಿಗೆ ಬಂದಿದ್ದ ಆಂಬುಲೆನ್ಸ್ ಅನ್ನು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸೂಚಿಸಿದ್ದು, ಈ ಸಂದರ್ಭ ಸ್ವತಃ ಖುದ್ದಾಗಿ ಸ್ಥಳದಲ್ಲಿ ನಿಂತು ಮಹಿಳೆಯಾಗಿ ಸೂಕ್ತ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡುವಂತೆ ಸಚಿವೆ ಸೂಚಿಸಿದ್ದಾರೆ.ಘಟನೆ ಸಂಬಂಧಿಸಿ ವಿಡಿಯೋ ನೋಡಿ

Leave a Reply

Your email address will not be published. Required fields are marked *