ಸಾಮಾನ್ಯ ನಾಗರಿಕರಂತೆ ತಮ್ಮ ಸ್ವಗ್ರಾಮದಲ್ಲಿ ಸಮಯ ಕಳೆದ ರಾಷ್ಟೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

ಪ್ರಧಾನಿ ನರೇಂದ್ರ ಮೋದಿ ಬಲಗೈ ಬಂಟ ಎಂದೇ ಖ್ಯಾತಿ ಪಡೆದ ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಲವು ವರ್ಷಗಳ ನಂತರ ಶನಿವಾರ ಉತ್ತರಾಖಂಡದ ಪೌರಿ ಗರ್ಹ್ವಾಲ್ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಕುಟುಂಬ ದೇವತೆ ಬಾಲ್ ಕುಮಾರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಝೆಡ್ ಪಲ್ಸ್ ಭದ್ರತೆ ಇದ್ದರೂ ಯಾವುದೇ ಪ್ರೋಟೋಕಾಲ್ ಅನುಸರಿಸದೆ ಸಾಮಾನ್ಯ ನಾಗರಿಕರಂತೆ ಹಳ್ಳಿಯಲ್ಲಿ ತನ್ನ ಸಮಯವನ್ನು ಕಳೆದಿದ್ದಾರೆ.ಇದೆ ಸಂದರ್ಭ ಹಲವು ಗ್ರಾಮಸ್ಥರ ಜೊತೆ ಸಂವಾದ ಕೂಡ ನಡೆಸಿದ್ದಾರೆ.ಅಜಿತ್ ದೋವಲ್ ಅವರು ದೇಶದ ಅನೇಕ ಬೇಹುಗಾರಿಕಾ ಕಾರ್ಯಾಚರಣೆಗಳಲ್ಲಿ ಮುಖ್ಯ ಪಾತ್ರವವನ್ನು ವಹಿಸಿದ್ದಾರೆ.

Leave a Reply

Your email address will not be published. Required fields are marked *